ಎಲ್ಲಾ ಪರೀಕ್ಷೆಗಳಿಂದ 20 ಜನರಿದ್ದರೆ ಕೇಂದ್ರವನ್ನು ಕೊಡಲಾಗುವುದು. ಒಂದೇ ಊರಿನಲ್ಲಿ 3 ಮೈಲಿಗಿಂತಲೂ ಅಂತರವಿದ್ದಲ್ಲಿ ಮಾತ್ರ ಬೇರೆಯ ಕೇಂದ್ರವನ್ನು ಕೊಡಲಾಗುವುದು.
ಹೊಸ ಕೇಂದ್ರವನ್ನು ಬಯಸುವವರು ಪರೀಕ್ಷೆ ಕಟ್ಟುವ ದಿನಾಂಕಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿ ಅರ್ಜಿ ಬರೆದುಕೊಂಡು ಕೇಂದ್ರವನ್ನು ಮಂಜೂರು ಮಾಡಿಸಿಕೊಳ್ಳಬೇಕು.
ಪರೀಕ್ಷಾ ವ್ಯವಸ್ಥೆ:
ವಿದ್ಯಾರ್ಥಿಗಳಿಗೆ ಬರೆಯಲು ಉತ್ತರ ಪತ್ರಿಕೆಗಳನ್ನೂ, ಇತರ ಪರೀಕ್ಷಾ ಸಾಮಾಗ್ರಿಗಳನ್ನು ಸಭೆಯ ವತಿಯಿಂದ ಒದಗಿಸಲಾಗುವುದು. ವಿದ್ಯಾರ್ಥಿಗಳು ಪೆನ್ನನ್ನು ಮಾತ್ರ ತಂದಿರಬೇಕು.
ಪರೀಕ್ಷೆಗಳನ್ನು ಊರಿನ ಶಾಲೆಗಳಲ್ಲಿ ಅಥವಾ ಸಾರ್ವಜನಿಕವಾದ ಸರಿಯಾದ ವ್ಯವಸ್ಥೆಯುಳ್ಳ ಸ್ಥಳಗಳಲ್ಲಿ ಸೂಚಿಸಿದ ಕಾಲಕ್ಕೆ ಸರಿಯಾಗಿ (ಸಮರ್ಪಕವಾಗಿ) ನಡೆಸಬೇಕು.
ವಿ.ಸೂ– ಉಪಾಧ್ಯಾಯರು ಪ್ರವೇಶ ಧನ ಅಥವಾ ಬೋಧನಾ ಶುಲ್ಕ ಎಂದು ಪರೀಕ್ಷಾ ಶುಲ್ಕವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಸ್ವಲ್ಪ ಹಣವನ್ನು ಪಡೆಯಬಹುದು. ಈ ಹಣವನ್ನು ಸಭೆಗೆ ಕಳುಹಿಸಬೇಕಾಗಿಲ್ಲ.