ಪ್ರವೇಶಾರ್ಹತೆ ಮತ್ತು ನಿಯಮಗಳು

.ಪ್ರಥಮಾ ೨.ದ್ವಿತೀಯಾ ೩. ತೃತೀಯಾ ೪.ತುರೀಯಾ ೫.ಪ್ರವೇಶ-ಎ೦ಬ ಐದು ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಬಾರಿ, ಸಾಮಾನ್ಯವಾಗಿ ಜನವರಿ ಮತ್ತು ಆಗಸ್ಟ್ ಮಾಸದ ಕೊನೆಯ ಭಾನುವಾರಗಳ೦ದು ನಡೆಸಲಾಗುವುದು.

ಪರೀಕ್ಷೆಗೆ ಕೂರಲು ಅರ್ಹತೆ:

ಸಭೆಯ ಪರೀಕ್ಷೆಗಳಿಗೆ ಕೂರಲು ವಯೋಮಿತಿ ಇಲ್ಲ. ಅಭಿರುಚಿಯುಳ್ಳ ಯಾರು ಬೇಕಾದರೂ ಕುಳಿತುಕೊಳ್ಳಬಹುದು.
ಅಲ್ಲದೆ ನೇರವಾಗಿ ಯಾವ ಪರೀಕ್ಷೆಗೆ ಬೇಕಾದರೂ ಕುಳಿತುಕೊಳ್ಳಬಹುದು. (ಮುಂದಿನ ಹಂತದ ಪರೀಕ್ಷೆಯನ್ನು ತೆಗೆದುಕೊಳ್ಳಲು ಹಿಂದಿನ ಪರೀಕ್ಷೆಯನ್ನು ತೆಗೆದುಕೊಂಡಿರಲೇಬೇಕು ಎಂಬುದು ಕಡ್ಡಾಯವಲ್ಲ. ಆದರೆ, ಕ್ರಮಶಃ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ಸಂಸ್ಕೃತದಲ್ಲಿ ಉತ್ತಮ ಜ್ಞಾನವನ್ನು ಸಂಪಾದಿಸಬಹುದು ಎಂಬುದು ಸಭೆಯ ಆಶಯ).

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡು ತೇರ್ಗಡೆಯಾಗಿರುವವರು ಪ್ರಥಮಾ, ದ್ವಿತೀಯಾ ಪರೀಕ್ಷೆಗೆ ಕುಳಿತುಕೊಳ್ಳಕೂಡದು. ಅಂತಹವರು ನೇರವಾಗಿ ತೃತೀಯಾ ಅಥವಾ ಅದರ ಮುಂದಿನ ಪರೀಕ್ಷೆಗಳಿಗೆ ಕುಳಿತುಕೊಳ್ಳಬಹುದು.


ವಿದ್ಯಾರ್ಥಿಗಳಿಗೆ ನಿಯಮಗಳು

  1. ಪರೀಕ್ಷಾ ಶುಲ್ಕವನ್ನು ಮತ್ತು ಆವೇದನಾ ಪತ್ರಗಳನ್ನು ಕಳುಹಿಸಿದ ನಂತರ, ಅದನ್ನು ಹಿಂದಕ್ಕೆ ಕೊಡುವುದಾಗಲೀ, ಮುಂದಿನ ಪರೀಕ್ಷೆಗೆ ಮೀಸಲಾಗಿರಿಸುವುದಾಗಲೀ, ಬೇರೆಯವರಿಗೆ ವರ್ಗಾಯಿಸುವುದಾಗಲೀ ಮಾಡಲಾಗುವುದಿಲ್ಲ.
  2. ಪರೀಕ್ಷಾ ಕೇಂದ್ರವನ್ನು ಬದಲಾಯಿಸಬೇಕಾದ ಅಗತ್ಯವಿದ್ದಲ್ಲಿ ಒಂದು ತಿಂಗಳು ಮುಂಚಿತವಾಗಿ ಕಾರ್ಯದರ್ಶಿಯವರಿಗೆ ಪತ್ರ ಮುಖೇನ ತಿಳಿಸಬೇಕು.
  3. ಪ್ರಥಮಾಪರೀಕ್ಷೆಯಲ್ಲಿ:- ವಿದ್ಯಾರ್ಥಿಗಳು ೨೦ ಅಂಕಗಳಿಗೆ ಸಂಸ್ಕೃತದಲ್ಲಿ ಉತ್ತರಿಸಬೇಕು. ಉಳಿದ ಉತ್ತರಗಳನ್ನು ಸಂಸ್ಕೃತ, ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಬರೆಯಬಹುದು.
  4. ದ್ವಿತೀಯಾ ಪರೀಕ್ಷೆಯಲ್ಲಿ ೪೦ ಅಂಕಗಳಿಗೆ ಸಂಸ್ಕೃತದಲ್ಲೇ ಉತ್ತರಿಸಬೇಕು. ಉಳಿದ ೬೦ ಅಂಕಗಳಿಗೆ ಸಂಸ್ಕೃತ, ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸಬಹುದು.
  5. ತೃತೀಯಾ ಪರೀಕ್ಷೆಯಲ್ಲಿ ೬೦ ಅಂಕಗಳಿಗೆ ಸಂಸ್ಕೃತದಲ್ಲೇ ಉತ್ತರಿಸಬೇಕು.
  6. ತುರೀಯಾ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ಪೂರ್ಣವಾಗಿ ಸಂಸ್ಕೃತದಲ್ಲೇ ಉತ್ತರಿಸಬೇಕು. (ಅನುವಾದಭಾಗವನ್ನು ಹೊರತುಪಡಿಸಿ).

 

ಕೇ೦ದ್ರದ ಮುಖ್ಯಸ್ಥರು/ಶಿಕ್ಷಕರಿಗೆ ನಿಯಮಗಳು

1. ಪರೀಕ್ಷಾ ಕಛೇರಿಯಿಂದ ಕಳುಹಿಸಲಾದ ಭಾಂಗಿಯನ್ನು ಒಡೆದು, ಅದರಲ್ಲಿರುವ ಉತ್ತರಪತ್ರಿಕೆ, ಪ್ರವೇಶಪತ್ರ ಇತ್ಯಾದಿಗಳನ್ನು ಪ್ರತ್ಯೇಕಿಸಿ, ಸೀಲಾದ ಕವರುಗಳನ್ನು ಗೋಪ್ಯವಾಗಿಟ್ಟಿದ್ದು ಪರೀಕ್ಷೆಯ ದಿನ ನಿಯಮಿತ ವೇಳೆಗೆ 15 ನಿಮಿಷ ಮುಂಚಿತವಾಗಿ ಸಾಕ್ಷಿಗಳ ಎದುರಿನಲ್ಲಿ ಒಡೆದು ಅವರ ಸಹಿ ಪಡೆಯಬೇಕು.

2. ಪರೀಕ್ಷಾ ಸಾಮಗ್ರಿಗಳಲ್ಲಿ ಏನಾದರೂ ನ್ಯೂನ್ತತೆಗಳಿದ್ದರೆ ಕಛೇರಿಗೆ ಕೂಡಲೇ ತಿಳಿಸಬೇಕು.

3. ಯಾವ ಕಾರಣದಿಂದಲೇ ಆಗಲಿ ಪರೀಕ್ಷಾ ದಿನಾಂಕವನ್ನು ಮತ್ತು ವೇಳೆಯನ್ನು ಬದಲಾಯಿಸಬಾರದು.

4. ಆಯಾಯ ಕೇಂದ್ರದ ಪರೀಕ್ಷಾ ವ್ಯವಸ್ಥಾಪಕರು ಆ ದಿನ ಪರೀಕ್ಷೆಗಳನ್ನು ಸಂದರ್ಶಿಸಲು ಆ ಊರಿನ ಪ್ರತಿಷ್ಠಿತ ಗಣ್ಯವ್ಯಕ್ತಿಯೊಬ್ಬರನ್ನು ಆಹ್ವಾನಿಸಿ ಅವರ ಅಭಿಪ್ರಾಯವನ್ನು ಲಿಖಿತವಾಗಿ ಪಡೆದು ಕಛೇರಿಗೆ ಕಳುಹಿಸಬೇಕು.

5. ಅಭ್ಯರ್ಥಿಗಳು ತಮ್ಮ ಕ್ರಮಾಂಕವನ್ನು ಉತ್ತರ ಪತ್ರಿಕೆಗಳ ಮೇಲೆ ಸ್ಪಷ್ಟವಾಗಿ ಬರೆದಿರುವುದನ್ನು ವೀಕ್ಷಕರು ಗಮನಿಸಿ ಸಹಿ ಮಾಡಬೇಕು. ಉತ್ತರಪತ್ರಿಕೆಗಳ ಮೇಲೆ ಕೇಂದ್ರದ ಸೀಲನ್ನಾಗಲೀ ಹೆಸರನ್ನಾಗಲೀ ನಮೂದಿಸಬಾರದು.

6. ಹಾಜರಿಪಟ್ಟಿಯಲ್ಲಿ ಎಲ್ಲಾ ಭಾಗಗಳನ್ನು ತುಂಬಿರಬೇಕು. ಅನುಪಸ್ಥಿತ ವಿದ್ಯಾರ್ಥಿಗಳ ಕ್ರಮಾಂಕ ಮತ್ತು ಹೆಸರುಗಳನ್ನು ತಪ್ಪದೇ ಬರೆದು ಕಳುಹಿಸಿಕೊಡಬೇಕು.

7. ಉತ್ತರಪತ್ರಿಕೆಗಳನ್ನು ಕ್ರಮವಾಗಿ ಜೋಡಿಸಿ ಆಯಾಯ ಪರೀಕ್ಷೆಗೆ ಗೊತ್ತು ಪಡಿಸಿದ ಹಾಜರಿಪಟ್ಟಿಯನ್ನು ಆಯಾಯ ಪರೀಕ್ಷೆಗಳ ಉತ್ತರಪತ್ರಿಕೆಗಳ ಬಂಡಲ್ಗಳ ಮೇಲೆ ದಾರದಿಂದ ಕಟ್ಟಿ ಕಳುಹಿಸಿಕೊಡಬೇಕು.

8. ಮೂವತ್ತು ಅಭ್ಯರ್ಥಿಗಳಿಗೆ ಒಬ್ಬರಂತೆ ವೀಕ್ಷಕರನ್ನು ನೇಮಿಸಿಕೊಳ್ಳಬಹುದು, ಮತ್ತು ಈ ಕೆಳಗೆ ಕಂಡಂತೆ ಸಹಾಯಕ (ರಿಲೀವಿಂಗ್) ವೀಕ್ಷಕರನ್ನು ನೇಮಿಸಿಕೊಳ್ಳಬಹುದು.
ಅ. 250 ಅಭ್ಯರ್ಥಿಗಳವರೆಗೆ – ಓರ್ವ ಸಹಾಯಕ ವೀಕ್ಷಕ
ಆ. 250-500 ಅಭ್ಯರ್ಥಿಗಳವರೆಗೆ – ಇಬ್ಬರು ಸಹಾಯಕ ವೀಕ್ಷಕರು
ಇ. 500-1000 ಅಭ್ಯರ್ಥಿಗಳಿದ್ದರೆ – ನಾಲ್ವರು ಸಹಾಯಕ ವೀಕ್ಷಕರು

9. ಮೂವತ್ತಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ನೂರು ಅಭ್ಯರ್ಥಿಗಳಿಗೆ ಒಬ್ಬರಂತೆ ಸೇವಕರನ್ನು ನೇಮಿಸಿಕೊಳ್ಳಬಹುದು. ಮೂವತ್ತಕ್ಕಿಂತ ಕಡಿಮೆ ಅಭ್ಯರ್ಥಿಗಳಿದ್ದರೆ ಸಹಾಯಕ ವೀಕ್ಷಕರನ್ನಾಗಲೀ ಸೇವಕರನ್ನಾಗಲೀ ನೇಮಿಸಿಕೊಳ್ಳಬಾರದು.

10. ಪರೀಕ್ಷೆ ಮುಗಿದ ಮೇಲೆ ಉತ್ತರಪತ್ರಿಕೆಗಳನ್ನು ಪರೀಕ್ಷಾವಾರು ಕ್ರಮವಾಗಿ ಜೋಡಿಸಿ, ಆಯಾಯ ಪರೀಕ್ಷೆಯ ಗೈರು ಹಾಜರಿ ಪಟ್ಟಿಯನ್ನು ಕ್ರಮವಾಗಿ ಅದಕ್ಕೆ ಲಗತ್ತಿಸಿ, ಭದ್ರವಾಗಿ ಬಂಡಲ್ ಮಾಡಿ ರಿಜಿಸ್ಟರ್ಡ್ ಪಾರ್ಸಲ್ ಕೊರಿಯರ್ ಮೂಲಕ, ಯಾವುದೇ ಕಾರಣಕ್ಕಾಗಿ ವಿಳಂಬ ಮಾಡದೇ, ಪರೀಕ್ಷೆ ಮುಗಿದ ಮಾರನೆಯ ದಿನವೇ ಕಳುಹಿಸಿಕೊಡಬೇಕು ಅಥವಾ ಖುದ್ದಾಗಿ ಬಂದು ತಲುಪಿಸಬೇಕು. ಆ ಬಂಡಲ್ನಲ್ಲಿಯೇ ಹಾಜರಿಪಟ್ಟಿ (ನಾಮಿನಲ್ ರೋಲ್)ಯನ್ನೂ ಇಟ್ಟು ಕಳುಹಿಸಬೇಕು.
ರಿಜಿಸ್ಟರ್ಡ್ ಪಾರ್ಸಲ್ ಮಾಡಿದ ಅಂಚೆ ಕಛೇರಿಯ ರಶೀತಿಯನ್ನೂ ಮತ್ತು ವೀಕ್ಷಕರ ಸಂಭಾವನಾ ರಶೀತಿಯನ್ನೂ ಬೇರೆ ಕವರಿನಲ್ಲಿ ಕಳುಹಿಸಿಕೊಡಬೇಕು.

11. ಪರೀಕ್ಷಾ ಕೆಲಸಗಳಿಗೆ ಸಂಭಾವನೆ:
1. ವೀಕ್ಷಕರ ಸಂಭಾವನೆ-
ಪ್ರಧಾನ ವೀಕ್ಷಕರು-ಪರೀಕ್ಷೆಯು ಒಂದು ಹೊತ್ತು ಇದ್ದರೆ, ರೂ. 35.00 (ಮೂವತ್ತೈದು ರೂಪಾಯಿಗಳು) ಪರೀಕ್ಷೆಯು ಎರಡು ಹೊತ್ತು ಇದ್ದರೆ ರೂ. 50.00 (ಐವತ್ತು ರೂಪಾಯಿಗಳು).

ವೀಕ್ಷಕರು- ಒಂದು ಹೊತ್ತು ಇದ್ದರೆ, ರೂ. 25.00 (ಇಪ್ಪತ್ತೈದು ರೂಪಾಯಿಗಳು) ಎರಡು ಹೊತ್ತು ಒಬ್ಬರೇ ವೀಕ್ಷಕರು ಇದ್ದರೆ ರೂ. 35.00 (ಮೂವತ್ತೈದು ರೂಪಾಯಿಗಳು). ಸಹಾಯಕ (ರಿಲೀವಿಂಗ್) ವೀಕ್ಷಕರಿಗೂ ಇದೇ ಅನ್ವಯವಾಗುತ್ತದೆ.

ಸೇವಕರು-ಪರೀಕ್ಷೆಯ ಒಂದು ಹೊತ್ತಾಗಲೀ ಅಥವಾ ಎರಡು ಹೊತ್ತಾಗಲೀ ಇದ್ದರೆ ಒಟ್ಟು ರೂ. 15.00 (ಹದಿನೈದು ರೂಪಾಯಿಗಳು)

ಆವೇದನಾ ಪತ್ರಗಳನ್ನು ಮತ್ತು ಶುಲ್ಕವನ್ನು ಕಳುಹಿಸಲು, ಸಾಮಾನ್ಯವಾಗಿ ಜನವರಿ ಪರೀಕ್ಷೆಗೆ ಹಿಂದಿನ ಡಿಸೆಂಬರ್ 10 ಮತ್ತು ಆಗಸ್ಟ್ ಪರೀಕ್ಷೆಗೆ ಜುಲೈ 10 ಕಡೆಯ ದಿನಗಳು.

ಆನಂತರದ 10 ದಿನಗಳವರೆಗೆ ವಿಶೇಷ ಶುಲ್ಕ ಪ್ರತಿ ಆವೇದನಾಪತ್ರಕ್ಕೆ ಒಂದು ರೂ. ಜೊತೆ ಶುಲ್ಕವನ್ನು, ಆವೇದನಾ ಪತ್ರಗಳನ್ನು ಕಳುಹಿಸಬಹುದು. ಅನಂತರ ಬರುವ ಶುಲ್ಕ ಮತ್ತು ಆವೇದನಾ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

ಪರೀಕ್ಷಾ ಶುಲ್ಕದ ಒಟ್ಟು ಮೊತ್ತದಲ್ಲಿ ಶೇಕಡ ಮೂವತ್ತು ಅಂಶವನ್ನು ಉಪಾಧ್ಯಾಯರು ತೆಗೆದುಕೊಂಡು ಉಳಿದ ಹಣವನ್ನು ಬ್ಯಾಂಕ್ ಡ್ರಾಫ್ಟ್ ಅಥವಾ ಪೋಸ್ಟಲ್ ಅಡ್ರಸ್ ಮೂಲಕ “ಕಾರ್ಯದರ್ಶಿ, ಶ್ರೀ ಸುರಸರಸ್ವತೀ ಸಭಾ, ಶೃಂಗೇರಿ, ಶ್ರೀ ಅಭಿನವ ಮಂದಿರ, ಶ್ರೀ ಶಂಕರ ಮಠದ ಆವರಣ, ಶಂಕರಪುರಂ, ಬೆಂಗಳೂರು-560004”-ಈ ವಿಳಾಸಕ್ಕೆ ಕಳುಹಿಸಬೇಕು.

ಪರೀಕ್ಷಾಶುಲ್ಕ ಮತ್ತು ಪುಸ್ತಕಗಳ ಬೆಲೆಯು ಕಾಲಕಾಲಕ್ಕೆ ಬದಲಾಗಬಹುದು. ಆದ್ದರಿಂದ ಉಪಾಧ್ಯಾಯರು ಸರಿಯಾದ ಮೊತ್ತವನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕು.

Comments are closed.